Tuesday, November 8, 2022

ಸಾವಯವ ಕೃಷಿ

ಸಾರಬೇಕಿದೆ ನಾವು ಸಾವಯವ ತತ್ವ
ಬೇಸಾಯದಿ ಪಾಲಿಸೋಣ ಸಾವಯವ ಸತ್ವ
 
ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ
 
ಮರೆತರಂತು ಮಣ್ಣಿನ ಇತಿಹಾಸ
ಸೃಷ್ಟಿಸಲಾಗದು ಮನುಜಮೊಗದಲ್ಲಿ ಮಂದಹಾಸ
 
ಸವಕಳಿ ತಡೆಯಲು ಬದು ನಿರ್ಮಾಣ
ಬದುವಿಲ್ಲದ ಹೊಲ-ಗದ್ದೆಗಳವು ಅಂತರ್ಜಲಕ್ಕೆ ನಿರ್ಯಾಣ
 
ಮಾರಕ ಕೀಟನಾಶಕಗಳು, ರಸಗೊಬ್ಬರಗಳವು ಅಧಿಕ ಖರ್ಚಿಗೆ ದಾರಿ
ಪಾಲಿಸೋಣ ಸಾವಯವ ಸತ್ವ ಆಗದು ಬೇಸಾಯ ದುಭಾರಿ
 
ಸಾವಯವ ಕೃಷಿಯದು ದುಡಿವುದು ಮಣ್ಣಿನ ಬಲವರ್ಧನೆಗೆ
ಬಹು ಬೇಡಿಕೆ ಇರುವುದು ಸಾವಯವ ಬೆಳೆಗಳಿಗೆ
 
ತರಗೆಲೆ, ಕಳೆಗಿಡ ಭೂಮಿಗೆ ಗೊಬ್ಬರ
ಹಾಕದಿರು ನೀ ಮಣ್ಣಲಿ ಕರಗದಿಹ ರಸಗೊಬ್ಬರ
 
ಯುವ ರೈತರೆಲ್ಲರೂ ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ

Sunday, November 6, 2022

ಜ್ಞಾನ ದೀವಿಗೆ

ಜ್ಞಾನ ದೀವಿಗೆ ಇದು ಹಣತೆಯಂತೆ,
ಹಳತಾದರೇನು ಹೊಸತಾದರೇನು,
ನೀಡುವ ಸುಜ್ಞಾನ ಭೋದವಂದೆ! 

ಹಳತೆಂದು ಅನ್ನದಿರು,
ಅದು ಅನುಭವದ ಕಂತೆ,
ಹಳತಾಗಿರುವುದು ಜ್ಞಾನಸುಧೆ  ಹರಿಸಿದಂತೆ!

ಇರಲಿ ಮನೆ ಮನಗಳಲ್ಲಿ,
ಪುಸ್ತಕದ ಮೇಜು, 
ಅದುವೇ ಸುಜ್ಞಾನದ  ಮೋಜು!

Wednesday, October 26, 2022

ಬೆಳಕಿನಾಚರಣೆಯ ಬಿರುಸು ಬೆಂಕಿಯಲ್ಲಿ ಬೆಂದಿದೆ

ಕೇಳದಾಗಿದೆ ಪ್ರಕೃತಿ ಮಾತೆಯ ಆರ್ತನಾದ
ಈ ಸದ್ದು ಗದ್ದಲಗಳಲ್ಲಿ
ಪಟಾಕಿಯ ಸದ್ದು ಗದ್ದಲಗಳಲ್ಲಿ

ಹೃದಯಗಳೀಗ ಕಂಪಿಸುತ್ತಿವೆ
ಇಂಗಾಲ ತುಂಬಿದೆ ಗಾಳಿಯಿಂದಾಗಿ
ಮತ್ತದೇ ಮನು ಕುಲದ ಆರ್ತನಾದ
ಕೇಳದಾಗಿದೆ ಈ ಪಟಾಕಿಯ ಸದ್ದು ಗದ್ದಲಗಳಲ್ಲಿ

Saturday, October 22, 2022

ಸಹನೆ

ಸಹನೆ ನನದಿರಬಹುದು, ಸಹಿಸಲೇಕೆ ನಿನ್ನ
ಪ್ರೀತಿಯಿಂದ ಧಾರೆಯೆರೆದದ್ದು ಎನ್ನ ಕನಸನ್ನ
ಸಹನೆಯಿಂದ ವಿಕಸನಗೊಳಿಸಿದ್ದು ನೂರಾರು ಹೃದಯಗಳನ್ನ
ವ್ಯಕ್ತಿತ್ವದಿಂದಾಚೆಯ ಹೋಲಿಕೆಯದು ಗುನ್ನ
ನಿರ್ದರಿಸಿಯೇ ಆಯಿತು, ಇಲ್ಲಿಂದ ಕಾಲ್ಕಿಳುವುದೇ ಚೆನ್ನ
ಇಲ್ಲಿಂದ ಕಾಲ್ಕಿಳುವುದೇ ಚೆನ್ನ...

Wednesday, October 12, 2022

ಸಿರಿಧಾನ್ಯ - ನಾನು ಯಾರು

ನಾನು ಯಾರು ಬಲ್ಲೆಯೇನು
ಆರೋಗ್ಯದ ಸಿರಿಯು ನಾನು
ಪ್ರೋಟೀನು ಐರನ್ನು ಕ್ಯಾಲ್ಸಿಯಂ ಕಣಜ ನಾನು
ಅಕ್ಕಿ ಗೋದಿ ಮೈದಕ್ಕೆ ಬದಲಿ ನಾನು
ಹಿರಿಯ ಸಿರಿಯ ಸಿರಿಧಾನ್ಯ ನಾನು

ಸಮತೋಲನ ಆಹಾರದ ಸರದಾರನು 
ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹಕ್ಕೆ ಮದ್ದಲ್ಲವೇನು
ಕಡಿಮೆ ಕ್ಯಾಲೋರಿ, ರೋಗ ನಿರೋಧಕ ಶಕ್ತಿನೀಡುವೆನು
ಸಿರಿಯ ಹಿರಿಯ ಸಿರಿಧಾನ್ಯ ಸೇವನೆ ಅವಶ್ಯವಲ್ಲವೇನು 

ನೀರ ಬವಣೆ ನೀಗುವೆನು
ಬಿಸಿಲು ಬರ ಶಾಖ ತಟ್ಟದೆನ್ನನು
ಪರಿಸರ ಪೋಷಕನು ನಾನು
ಭೂ ಒಡಲ ಬರಿದಾಗಿಸೆನು
ಮನುಜ, ಮಣ್ಣು ರಕ್ಷಕ ನಾನಲ್ಲವೇನು
ಹಿರಿಯ ಸಿರಿಯ ಸಿರಿಧಾನ್ಯ ನಾನು

Friday, May 15, 2020

ಬೆಲೆ ಇಲ್ಲದ ಬದುಕ ಬವಣೆ

ನಿನ್ನಸಿವು  ಇಂಗಿಲ್ಲವೇನು
ನಿನ್ನೀ  ಅಟ್ಟಹಾಸಕ್ಕೆ  ಕೊನೆ ಇಲ್ಲವೇನು
ಬರಡಾದ  ಬದುಕಿಗೆ ಬೆಳಕಿಲ್ಲವೇನು
ಕರೋನ...! ನಿನ್ನಿಂದಾದ ದ್ರೋಹಕ್ಕೆ ಕೊನೆ ಇಲ್ಲವೇನು

ಮನ್ನಿಸು ಮಂಡಿಯೂರಿರುವ ಈ ನಿನ್ನ ಕಂದಮ್ಮಗಳ ತಾಯೆ
ಇರಲಿ ಈ ಕರೋನಾಗೆ ನಿನ್ನಿಂದ ಮುಕ್ತಿಯ ಛಾಯೆ...!!!

Tuesday, May 5, 2020

ಕ್ಷಮೆ ಇರಲಿ, ತಿದ್ದುಬಿಡಿ

ತಪ್ಪು, ತಿದ್ದುವ ಕಣ್ಣ್ಗಳಲ್ಲಿದೆಯೇ ಹೊರತು,
ಕರ್ತೃವಿನ ಕೈಯಲ್ಲಲ್ಲ

ಮುದ್ದು ಕಂದಮ್ಮಗಳ ತಪ್ಪು ಒಪ್ಪುಗಳ ತಿದ್ದಲಿಲ್ಲವೇ ನಾವು
ನಲ್ಲ ನಲ್ಲೆಯರ ನಯ ವಂಚನೆಗಳ  ಕ್ಷಮಿಸಲಿಲ್ಲವೇ ನಾವು

ಸರಿಯಲಿ ಮಾತೃಹೃದಯದ ಮೇಲೆ ಹೊರಿಸಿರುವ ಪೊರೆ
ಹರಿಯಲಿ ಸ್ನೇಹ ಪ್ರೀತಿಯ ಸಂಬಂಧಗಳ ನೆರೆ

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!