Wednesday, November 22, 2023

ಯುವ ಸಮೂಹ ಪುಸಕ ಗಳನ್ನು ಓದುವ ರೀತಿ ಮನಸ್ಸುಮೂಡಿಸ್ಸವುದು ಹೇಗೆ

 ಹಿರಿಯರು -
 
ತಿಳಿಹೇಳಬೇಕಿದೆ ನಾವು "ಓದು" ಕರ್ತವ್ಯವಲ್ಲವೆಂದು
ಪ್ರಸ್ತುತಪಡಿಸಬೇಕಿದೆ ನಾವು "ಓದು" ಉಡುಗೊರೆಯಂದು
 
ಅರಿವ ಪಸರಿಸಬೇಕಿದೆ ಇಂದಿನೋದುಗನೆ ನಾಳೆಯ ನಾಯಕ
ತಿಳಿಸಬೇಕಿದೆ ಪುಸ್ತಕಗಳೋದಿದ ಯುವಶಕ್ತಿಯೇ ದೇಶದ ನಾವಿಕ
 
ನೀಡಬೇಕಿದೆ ನಾವು ರುಚಿಸುವ ಪುಸ್ತಕವ
ಬಲಪಡಿಸಲು ಯುವಶಕ್ತಿಯ ಮಸ್ತಕವ
 
ಯುವಕರು –
 
ಪುಸ್ತಕಗಳಿವು ಆತ್ಮದಸಿವಿಗೆ ಆಹಾರ
ಓದಿದರೆ ನೀ-ಗಳಿಸುವುದಿದೆ ಅಪಾರ
 
ಓದಬೇಕಿದೆ ನಾವು ಪಠ್ಯದಿಂದಾಚೆಗೂ
ಸಿಕ್ಕಿ-ಬೀಳದಿರಲು ದೈಹಿಕ-ಮಾನಸಿಕ ಒತ್ತಡದ ಗೋಚಿಗೂ
 
ಪುಸ್ತಕದ ಪುಟಗಳಲ್ಲಿದೆ ಅಸಾಧಾರಣ ಶಕ್ತಿ
ತಿಳಿದರೆ ನೀ ಪಡೆವೆ ನಾಯಕನ ಯುಕ್ತಿ
 
ಪುಸ್ತಕಗಳಿವೋ ನಿನ್ನೊಡಲ ಸಲಹೆಗಾರ
ಅರಿತರೆ ನೀ ಸೋಲಿಲ್ಲದ ಸರದಾರ!!!

Monday, November 13, 2023

ಹಚ್ಚಬೇಕಿದೆ ನಾವು "ಬದುಕೆಂಬ ಬೆಳಕ ದೀಪ"

ಕತ್ತಲೆಂದು ಕೊರಗದಿರಲು
ಕಷ್ಟವೆಂದು ಸೊರಗದಿರಲು
ಬಳಲಿದೆನೆಂದು ಬೆದರದಿರಲು
ಬೆಳೆಯಲಾರನೆಂದು ಬಂದಿಯಾಗದಿರಲು
ಬದುಕು ನಿನದೆ ನೀನದರ ಬೆಂಬತ್ತಿರಲು

Friday, November 3, 2023

ಹಚ್ಚಬೇಕಿದೆ ನಾವು "ದೀಪ"

ಆತ್ಮಸಾಕ್ಷಾತ್ಕಾರಕ್ಕಾಗಿ
ಪ್ರಸನ್ನತೆಯ ಪ್ರಾಪ್ತಿಗಾಗಿ
ನಮ್ಮಾತ್ಮ ಜ್ಯೋತಿಯ ಮನನಕ್ಕಾಗಿ
ಮನು ಮನದ ಮಾನಸಿಕ ನೆಮ್ಮದಿಗಾಗಿ
ಮನುಕುಲದ ಪ್ರಾಣಶಕ್ತಿಯ ಸ್ಥಿರತೆಗಾಗಿ

ಮಹದಾಯಿಯ ಮಮತೆ ಇಲ್ಲ, ಕಾವೇರಿಯ ಕರುಣೆಯು ಇಲ್ಲ

ಮಾತೆ ಮಹದಾಯಿಯು ಇವಳು
ಹರಿವಳು ಕರ್ನಾಟಕ, ಮಹಾರಾಷ್ಟ್ರ, ಗೋವಾದೊಳು
ಅರಬ್ಬೀ ಸಮುದ್ರದ ಅಂತರಂಗದೊಳು ಇಳಿವಳು
 
ಕರುಣೆಯ ಕಾವೇರಿಯು ಇವಳು
ಹರಿವಳು ಕರ್ನಾಟಕ, ತಮಿಳುನಾಡಿನೊಳು
ಬಂಗಾಳ ಕೊಲ್ಲಿಯಲ್ಲಿ ಇಳಿವಳು
 
ಬಯಲ ಬೆಳೆಯ, ಕುಡಿವ ಕಂದನ ಬಾಯಾರಿಕೆಯನ್ನಾರಿಸಿ
ಕಬ್ಬು, ಭತ್ತ, ರಾಗಿ ಬೆಳೆಗಳ ಬೆಳೆಸಿ
ಖಗ ಮೃಗ ಕಾಡುಗಳ್ಳನ್ನರಳಿಸಿ
 
ಕರುನಾಡ ಕಂದಮ್ಮಗಳ ಮಾತೆಯರಿವರು
ಈಶ್ವರಿ ಸ್ವರೂಪದವರು
ಹರಿದು ಹಂಚಿ ವಿವಾದಕ್ಕೆ ಸಿಲುಕಿದವರು
 
ಕರುನಾಡ ಕಣ್ಗಳಿವರು
ಕರುಣೆಯಿಂದೆಮಗೆ ದೊರೆಯದಾಗಿಹರು
ಸ್ವಾರ್ಥ ನ್ಯಾಯದೀ ನೊಂದು ನಲಗಿಹರು
 
ಬರದ ಬೆಂಕಿಯಲಿ ಬೆಂದು
ಅನ್ಯಾಯದ ತೀರ್ಪುಗಳಲಿ ನೊಂದು
ತವರ ತೊರೆದಿಹರು ಇಂದು
 
ಕರುನಾಡಿನ ರೈತ ಕುವರರು ನಾವು
ಉಂಡಿವೆವು ಜಲ ನಿರ್ವಹಣಾ ಪ್ರಾಧಿಕಾರಗಳಿಟ್ಟ ಬೇವು
ಬೇಕಿದೆ ನಮಗೆ ಮಹದಾಯಿಯ ಮಮತೆ, ಕಾವೇರಿಯ ಕಾರುಣ್ಯವು

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...