Friday, November 3, 2023

ಮಹದಾಯಿಯ ಮಮತೆ ಇಲ್ಲ, ಕಾವೇರಿಯ ಕರುಣೆಯು ಇಲ್ಲ

ಮಾತೆ ಮಹದಾಯಿಯು ಇವಳು
ಹರಿವಳು ಕರ್ನಾಟಕ, ಮಹಾರಾಷ್ಟ್ರ, ಗೋವಾದೊಳು
ಅರಬ್ಬೀ ಸಮುದ್ರದ ಅಂತರಂಗದೊಳು ಇಳಿವಳು
 
ಕರುಣೆಯ ಕಾವೇರಿಯು ಇವಳು
ಹರಿವಳು ಕರ್ನಾಟಕ, ತಮಿಳುನಾಡಿನೊಳು
ಬಂಗಾಳ ಕೊಲ್ಲಿಯಲ್ಲಿ ಇಳಿವಳು
 
ಬಯಲ ಬೆಳೆಯ, ಕುಡಿವ ಕಂದನ ಬಾಯಾರಿಕೆಯನ್ನಾರಿಸಿ
ಕಬ್ಬು, ಭತ್ತ, ರಾಗಿ ಬೆಳೆಗಳ ಬೆಳೆಸಿ
ಖಗ ಮೃಗ ಕಾಡುಗಳ್ಳನ್ನರಳಿಸಿ
 
ಕರುನಾಡ ಕಂದಮ್ಮಗಳ ಮಾತೆಯರಿವರು
ಈಶ್ವರಿ ಸ್ವರೂಪದವರು
ಹರಿದು ಹಂಚಿ ವಿವಾದಕ್ಕೆ ಸಿಲುಕಿದವರು
 
ಕರುನಾಡ ಕಣ್ಗಳಿವರು
ಕರುಣೆಯಿಂದೆಮಗೆ ದೊರೆಯದಾಗಿಹರು
ಸ್ವಾರ್ಥ ನ್ಯಾಯದೀ ನೊಂದು ನಲಗಿಹರು
 
ಬರದ ಬೆಂಕಿಯಲಿ ಬೆಂದು
ಅನ್ಯಾಯದ ತೀರ್ಪುಗಳಲಿ ನೊಂದು
ತವರ ತೊರೆದಿಹರು ಇಂದು
 
ಕರುನಾಡಿನ ರೈತ ಕುವರರು ನಾವು
ಉಂಡಿವೆವು ಜಲ ನಿರ್ವಹಣಾ ಪ್ರಾಧಿಕಾರಗಳಿಟ್ಟ ಬೇವು
ಬೇಕಿದೆ ನಮಗೆ ಮಹದಾಯಿಯ ಮಮತೆ, ಕಾವೇರಿಯ ಕಾರುಣ್ಯವು

No comments:

ಜವಬ್ದಾರಿ

ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು