ಆರೋಗ್ಯದ ಸಿರಿಯು ನಾನು
ಪ್ರೋಟೀನು ಐರನ್ನು ಕ್ಯಾಲ್ಸಿಯಂ ಕಣಜ ನಾನು
ಅಕ್ಕಿ ಗೋದಿ ಮೈದಕ್ಕೆ ಬದಲಿ ನಾನು
ಹಿರಿಯ ಸಿರಿಯ ಸಿರಿಧಾನ್ಯ ನಾನು
ಸಮತೋಲನ ಆಹಾರದ ಸರದಾರನು
ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹಕ್ಕೆ ಮದ್ದಲ್ಲವೇನು
ಕಡಿಮೆ ಕ್ಯಾಲೋರಿ, ರೋಗ ನಿರೋಧಕ ಶಕ್ತಿನೀಡುವೆನು
ಸಿರಿಯ ಹಿರಿಯ ಸಿರಿಧಾನ್ಯ ಸೇವನೆ ಅವಶ್ಯವಲ್ಲವೇನು
ನೀರ ಬವಣೆ ನೀಗುವೆನು
ಬಿಸಿಲು ಬರ ಶಾಖ ತಟ್ಟದೆನ್ನನು
ಪರಿಸರ ಪೋಷಕನು ನಾನು
ಭೂ ಒಡಲ ಬರಿದಾಗಿಸೆನು
ಮನುಜ, ಮಣ್ಣು ರಕ್ಷಕ ನಾನಲ್ಲವೇನು
ಹಿರಿಯ ಸಿರಿಯ ಸಿರಿಧಾನ್ಯ ನಾನು
No comments:
Post a Comment