ಹೆಚ್ಚಿನದೇನು ಇಲ್ಲಾ... ಹುಟ್ಟಿದ್ದು ಮಂಡ್ಯಜಿಲ್ಲೆ, ಮಳವಳ್ಳಿ ತಾಲ್ಲೂಕಿನ ತೆಂಕಹಳ್ಳಿಯಲ್ಲಿ, ಬೆಳೆಯುತ್ತಾ ಬಂದ ಪತ್ರಿಕೋದ್ಯಮದ ಒಲವು ಕಾಲೇಜು ದಿನಗಳಲ್ಲೇ ಮೊಟಕುಗೊಳ್ಳುವಂತಾಯಿತು... ಬದುಕು ಬಿರುಗಾಳಿಗೆಸಿಕ್ಕಿ ಚೆಲ್ಲಾಪಿಲ್ಲಿಯಾದಾಗ ಬೆಂಗಳೂರು ಕೈ ಬೀಸಿಕರೆದು ಅಣ್ಣ ನಂಜುಂಡಸ್ವಾಮಿಯವರ ಆಶ್ರಯ ದೊರಕಿಸಿತು, ಹಾಗೆಯೆ ವಿವೇಕ್ ಅವರ ಸಾಂಗತ್ಯ ಐಟಿ ಯುಗದ ಪರಿಚಯ ಮಾಡಿಸಿ. ಗ್ರಾಫಿಕ್ಸ್, ಅನಿಮೇಷನ್ ಜ್ಞಾನದೊಂದಿಗೆ ಬದುಕಿನ ದಾರಿತೋರಿಸಿತು. ಮುಂದುವರಿದು ವೃತ್ತಿ ಬದುಕಿನ ಗುರುಗಳಾದ ಮಧು ಸತ್ಯನಾರಾಯಣ್ ರವರ ಒಡನಾಟ ಮುಂದಿನ ವಿದ್ಯಾಭ್ಯಾಸ, ಮ್ಯಾನೇಜ್ಮೆಂಟ್ ಕಲೆ, ವೃತ್ತಿ ಧರ್ಮದ ಹತ್ತು ಹಲವು ಅನುಭಗಳನ್ನು ತಿಳಿಸಿ... ಪರಿಪೂರ್ಣತೆಯ ಕಡೆಗೆ ದುಡಿವ ಛಲ ತುಂಬಿತು. ಅದೇ ದಾರಿಯಲ್ಲಿ ಪಯಣಿಗ ನಾನು.
ಐಟಿ ಬದುಕಿನಿಂದ ಸ್ವಲ್ಪ ಹೊರಗಡೆ ಬಂದು ಮನಸಿನ ಭಾವನೆಗಳನ್ನ ಬರವಣಿಗೆ ರೂಪದಲ್ಲಿ ನಿಮ್ಮ ಮುಂದೆ ಇಡೋ ಪ್ರಯತ್ನ, ಸ್ವೀಕರಿಸಿ... ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ:- prasadthenkahalli@gmail.com
No comments:
Post a Comment