Tuesday, December 5, 2023

ನಾವು!

ನಿಯತ್ತಿನ ನೊಗಹೊತ್ತವರು
ದುಡಿದು ದಣಿಯಲೇಬೇಕಿರುವವರು
ಗೆಲುವೊಂದ ಕಾಣಲು, ಸಾವಿರ ಸಲ ಸೋತವರು
ಬದುಕಿನ ಮೈಲುಗಲ್ಲುಗಳ ಮಗ್ಗಿಲಲಿ ಮೈಕೊಡವಿ ನಿಂತವರು

ಅವಕಾಶ ವಂಚಿತರು
ಪ್ರಭಾವಿಗಳ ಪವಾಡ ಪಡೆಯದಾದವರು
ಪ್ರಯತ್ನವೆಂಬ ಪ್ರಯಾಣದಲಿ ಒಂಟಿಯಾದವರು
ಬಿದ್ದೆದ್ದು ಗೆದ್ದಾಗ ಬೆನ್ನುತಟ್ಟುವವರು ಇಲ್ಲದವರು

ಸೋಲುಗಳ ಸರಮಾಲೆ ಹೊತ್ತವರು
ಸೋಲ ಸೊಲ್ಲಡಗಿಸಿ ಸೆಟೆದುನಿಂತವರು
ಅನುಭವದಿ ಹರಿತವಾದವರು
ನಾವು, ಸೋಲುಂಡು ಗೆಲ್ಲುವವರು

No comments:

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!