Sunday, December 17, 2023

ಬೆಳೆದು ಬೆಳಕಾಗುವ

ನಾವೊಂದು ಹೆಮ್ಮರದ ನೆರಳು
ಬಾಹುಬಲ ಚಾಚಬೇಕಿದೆ ಬುಡದಿಂದಲೇ
ಬೇರಬಿಡದೆ ಭುವಿಯ ಸುತ್ತುವರಿಯಲು 

ಚಿಮ್ಮಿ ಬಿರಿದು ಬೆಳೆದ ಬಂಧುಗಳು
ಬುಡ ಬಿಟ್ಟರೆಂತು
ಮರನಿಂತಿತೇ ನೆರಳಿಲ್ಲದೆ

ಈಗೀಗ, ಮರ ಬೇಡಿದೆ ಆಸರೆಯ
ಅರಿವಿನಾಸರೆಯ, ಬೆಳಕಿನಾಸೆರೆಯ
ಬುಡಬಿಡದೆ ಬೆಳೆದು ನಿಲ್ಲುವವರಾಸರೆಯ

ಮರ ಮರುಗದಿರಲಿ
ಮನ ಬೆಳಗುತಿರಲಿ
ಅರಿವು ಅಂತರವ ತರದಿರಲಿ

ಅರಿತು ಮರೆಯಾಗದೆ
ಬೆಳೆದು ಬೆಳಕಾಗುವ
ಮರದ ಬುಡಬಿಡದೆ ಬೆಳೆದು ಬೆಳಕಾಗುವ

No comments:

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!