Tuesday, August 8, 2023

ದಂಧೆಯ ತಂದೆ ಆಸ್ಪತ್ರೆ

ಮಕ್ಕಳುಟ್ಟುತ್ತಿದ್ದವು
ಮನೆಯಲ್ಲಿ
ಮಾನವೀಯತೆಯೂ ಹುಟ್ಟುತ್ತಿತ್ತು

ಆಗುತ್ತಿದೆ ಜನನ
ಆಸ್ಪತ್ರೆಯಲ್ಲಿ
ಹುಟ್ಟುತ್ತಿದೆ ಆಸೆಬುರುಕತನ

ಮೋಸ, ದಗಾ, ಕಳ್ಳತನವೊ
ಆಗುತ್ತದೆ
ನಮಗರಿವಿಲ್ಲದಂತೆ 

ಆಸ್ಪತ್ರೆಯ ಅಪಹರಣವೋ
ಹಾಡುಹಗಲೇ
ಆದರೂ ನಾವು ಆರೋಗ್ಯದಂದರು

ಬದುಕಲೋ, ಬದುಕಿಸಲೋ 
ನಾವ್ ಬೆವರುತ್ತಿರಲು
ಅವ ಬಸಿಯುತ್ತಿರುವ

Wednesday, May 24, 2023

ಅನುಭವದ ಹಣತೆ

ಅನುಭವದ ಹಣತೆಯಿಲ್ಲದೆ
ಹತ್ತಿದೇಣಿಯ ಒದ್ದು
ಗೆದ್ದು ಬೀಗುವುದೆಂತೋ...?
ಖುದ್ದು ದುಡಿಯದ ಹೊರತು
ಗದ್ದುಗೆಯು ದೊರೆಯದು...!
ಮೈಕೊಡವಿ ಮೇಲೆಳದೆ
ಪಲಿಸದಾಶೀರ್ವಾದ...!

Tuesday, April 18, 2023

ಬಿಜೆಪಿಯ ದಾಳ

ಪ್ರತಿ ಚುನಾವಣೆಯಲ್ಲಿ
ಬಿಜೆಪಿಯು ಉರುಳಿಸುತ್ತಿತ್ತು
ಭಾವನಾತ್ಮನಕ ದಾಳ
ಈ ಬಾರಿ ಉರುಳಿಸುತ್ತಿದೆ
ಉರಿಯಾಳುಗಳ ಕೋಳ

ಗಮ್ಯದೆಡಗಿನ ಗಮನ

ಗಮ್ಯದೆಡಗಿರಲಿ ನೆಟ್ಟ ನೋಟ
ಇಷ್ಟ-ಕಷ್ಟ ಕೊಡದಿರಲಿ ಕಾಟ
ಗುರಿಯಮುಂದೆ ನೆಡೆಯದಿರಲಿ ಬೇರಾವ ಮಾಟ

ಗಮ್ಯ-ಗೆಲುವಿನ ದಾರಿಯಲಿ
ಶ್ರಮ ಮಾರಿಯಂತಿರಲಿ
ಭದ್ರ ಬುನಾದಿಯ ದೃಢತೆಯೊಂದು ನಿನ್ನಜೊತೆಯಲಿರಲಿ

ಶ್ರಮಹೊಂದೆ ಗೆಲುವಿನ ಯಾನ
ಉಳಿದೆಲ್ಲವೂ ಗೌನ
ದೃಢ ಸಂಕಲ್ಪಗಳು ಕಾಯುವುದು ಮಾನ

Sunday, March 26, 2023

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!


ಬಿಜೆಪಿ ಎಂದಿತು ಭರವಸೆ
ಕಾಂಗ್ರೆಸ್ ಎಂದಿತು ಗ್ಯಾರಂಟಿ 
ಜೆಡಿಎಸ್ ಎಂದಿತು ಪರಿಹಾರ

ಭರವಸೆ, ಗ್ಯಾರಂಟಿ, ಪರಿಹಾರ ಬದಿಗಿರಲಿ!!!
ಎಣಿಸಿದ್ದೀರಾ  ಸಮಾವೇಶಗಳಿಂದಾಗುವ 
ಅನಾನುಕೂಲ, ಟ್ರಾಫಿಕ್ ಕಿರಿಕಿರಿ, ವಾಯುಮಾಲಿನ್ಯ...

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!
ಬದಲಾವಣೆಯಾ ಭಾವನೆಯು ಇಲ್ಲದ ನಿಮ್ಮಿಂದ!!!

ಕ್ಷಮೆಇರಲಿ, ಸಮ್ಮತಿಯೂ ಇರಲಾರದು
ಪ್ರಜ್ಞಾವಂತ  ಮತದಾರನಿಂದ...

Thursday, March 9, 2023

ಗೆಲ್ಲಲೊರಟ ಮನಕೆ

ಬಿದ್ದ ಬೀಜದ ಮೊಳಕೆ
ಹೊಸ ಜೀವಕ್ಕೆ ಒರತೆ
ಚಿಗುರೊಂದು ಹಸಿರಿಗೆ ನಾಂದಿ

ಬರಡಿರಲಿ ಬಿಸಿಲಿರಲಿ
ಬದುಕು ಹಸನಿರಲಿ
ಮೊಳಕೆ-ಚಿಗುರಗಳ ಕನಸುಗಳು ಮೇಳೈಸುತಿರಲಿ

ಗೆಲ್ಲಲೊರಟ ಮನಕೆ
ಬರ ಬಿಸಿಲು ತಂಪಾಗಿ
ಒಣ ಕೊರಡು ಚಿಗುರೊಡೆದು ಆಶಿಸುವುದು ಕಾಣ

Wednesday, March 8, 2023

ಮಹಿಳೆಯೆಂಬ ಮಹಾ ಮಹಿಮೆಗೆ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು

ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಬೆಳಗುತಿರಲಿ ನಿನ್ನ ಬಾಳ ನೌಕೆ

ಮಹಿಳೆಯೆಂಬ ಮಹಾ ಮಹಿಮೆಗೆ, ಮಹಿಳಾ ದಿನಾಚರಣೆಯ ಶುಭಾಶಯಗಳು

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!