Friday, March 2, 2012

'ಮಧು'ರವಾಯಿತು ನೆನಪು

ಸರಿ ಸುಮಾರು ನಾಲ್ಕು ವರ್ಷ ಮೂರು ತಿಂಗಳುಗಳ Logix Microsystems ನೊಂದಿಗಿನ ಒಡನಾಟ ಕಡಿದುಕೊಳ್ಳೋ ಕಾಲ ಎದುರಿಗೆ ಬಂದು ನಿಂತಿದೆ, ಹಲವಾರು ಏರು ಪೇರುಗಳು ನನಗೆ ಪಾಠಗಳನ್ನ ಕಲಿಸಿವೆ. ನನ್ನೋಳಗದಗಿದ್ದ ಲೀಡರ್ ಅನ್ನ ಉಡುಕಿ ತೆಗೆದ ಕೀರ್ತಿ ನನಗೆ ಮ್ಯಾನೇಜರ್ ಆಗಿ ನಮ್ಮ ಇಡಿ ತಂಡವನ್ನ ಮುನ್ನೆಡೆಸಿದ ಮಧು ಸತ್ಯನಾರಾಯಣ್ ಅವರಿಗೆ ಸಲ್ಲುತ್ತೆ. ೨೦೦೭ ಡಿಸೆಂಬರ್ ೧೩ನೇ ತಾರೀಕು ಈ ತಂಡವನ್ನ ಸೇರಿಕೊಂಡಾಗ ಏನೋ ಮುಜುಗರ, ಹೊಸ ವಾತಾವರಣ, ಹೊಸ ಜನ, ಹೊಸ ಪ್ರಾಜೆಕ್ಟ್, ಎಲ್ಲವು ಹೊಸದಿತ್ತು, ದಿನಗಳು ಕಳೆದಹಾಗೆ, ಎಲ್ಲವು ಅಬ್ಯಾಸ ಆಯಿತು, ಎಲ್ಲರೊಳಗೊಂದಾಗಿ ನಾನು ನಡೆದೇ, ನಮ್ಮದೇ ರಾಜ್ಯಬಾರ ಕೂಡ ನಡಿತು, ಬೇರೆ ಬೇರೆ ತಂಡಗಳೊಂದಿಗೆ ಕೆಲಸಮಾಡೋ ಅವಕಾಸ ಸಿಕ್ತು, ಹೊಸದನ್ನ ಕಲಿಯೋ ಅವಕಾಸಗಳು ನಾ ಮುಂದು ತಾ ಮುಂದು ಅಂತ ನುಗ್ಗಿ ಬಂದು ಒಂದಷ್ಟು ಜ್ಞಾನನ ನನ್ನ ತಲೆಗೆ ತುಂಬಿ ನನ್ನನ್ನ ಬೆಳೆಸಿದವು. ಹೊಸ ಹೊಸ ಚಾಲೆಂಜೆಸ್, ಹೊಸ ಗುರಿಗಳು, ನನ್ನ ಇಂದೇ ಗುರುವಾಗಿದ್ದ ಮಧುಅವರ ಸಲಹೆ ಸೂಚನೆಗಳು, ಎಲ್ಲವು ನನ್ನ ಮುಂದಿನ ಜೀವನಕ್ಕೆ ಅದ್ಬುತ ಪಾಠಗಳು. Hats off to ಮಧು. ಒಳ್ಳೆ ಗುರಿ, ಒಬ್ಬ ಒಳ್ಳೆ ಗುರು ಇದ್ರೆ ಏನೆಲ್ಲಾ ನಡಿಬೇಕೋ ಅದೆಲ್ಲವನ್ನ ನಾವು ಸಾದಿಸಿದ್ವಿ

ಎಲ್ಲವು ನಮ್ಮ ಇಡಿತದಲ್ಲೆ, ನಾವು ಅಂದುಕೊಂಡ ಹಾಗೆ ನಡೀತಾ ಇತ್ತು, ಅದಾವ ಗಳಿಗೆಯಲ್ಲಿ ಅದಾವ ಮಾರಿ ಕಣ್ಣು ಬಿತ್ತೋ ಏನೋ, ಮಧು ನಮ್ಮ ಟೀಂ ಇಂದ ಹೋಗಬೇಕಾಗಿ ಬಂತು. ಆ ಗಳಿಗೇನೆ ದೊಡ್ಡ ಸಿಡಿಲು ಬಡಿದಂತಾಗಿ ನಮ್ಮ ಟೀಂ ಚಿದ್ರ ಆಯಿತು. ನಮ್ಮಗಳ ರಾಜ್ಯಬಾರ ಕೂಡ ಮುಗಿಯೋ ಟೈಮ್ ಬಂತು. ಒಳ್ಳೆ ಗುರಿ, ಇದ್ದ ಒಳ್ಳೆ ಗುರು ಇಲ್ಲದಂತಾಗಿ, ಮುಂದಿನ ದಾರಿ ಹುಡುಕಾಟದಲ್ಲಿ ಇದೇನೇ. ಮತ್ತೆ ಹೊಸ ಜಾಗ, ಹೊಸ ಜನ, ಹೊಸ ಪ್ರಾಜೆಕ್ಟ್....

ಮಧು, ಇನ್ನು ಕೆಲವೇ ದಿನ ಈ ಕಂಪನಿ ಅಲ್ಲಿ ಇರ್ತೇನೆ, ಆದರೆ ನೀವಿಲ್ಲದ ಟೀಂ, ನೀವಿಲ್ಲದ ನಮ್ಮ ಕನಸಿನ AOA ಗೆ ಉಳಿವಿಲ್ಲ.

ದೋಣಿ ಸಾಗಲಿ ಮುಂದೆ ಹೋಗಲಿ ಅಂತ ಮುಂದೆ ಮುಂದೆ ಹೋಗ್ತಾ, ಮತ್ತೆ ಮಧು ಜೊತೆ ಕೆಲಸ ಮಾಡೋ ಕಾಲ ಬರಲಿ ಅಂತ ನನ್ನ ಆಸಯ.

No comments:

ಜವಬ್ದಾರಿ

ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು