Sunday, December 17, 2023

ಬೆಳೆದು ಬೆಳಕಾಗುವ

ನಾವೊಂದು ಹೆಮ್ಮರದ ನೆರಳು
ಬಾಹುಬಲ ಚಾಚಬೇಕಿದೆ ಬುಡದಿಂದಲೇ
ಬೇರಬಿಡದೆ ಭುವಿಯ ಸುತ್ತುವರಿಯಲು 

ಚಿಮ್ಮಿ ಬಿರಿದು ಬೆಳೆದ ಬಂಧುಗಳು
ಬುಡ ಬಿಟ್ಟರೆಂತು
ಮರನಿಂತಿತೇ ನೆರಳಿಲ್ಲದೆ

ಈಗೀಗ, ಮರ ಬೇಡಿದೆ ಆಸರೆಯ
ಅರಿವಿನಾಸರೆಯ, ಬೆಳಕಿನಾಸೆರೆಯ
ಬುಡಬಿಡದೆ ಬೆಳೆದು ನಿಲ್ಲುವವರಾಸರೆಯ

ಮರ ಮರುಗದಿರಲಿ
ಮನ ಬೆಳಗುತಿರಲಿ
ಅರಿವು ಅಂತರವ ತರದಿರಲಿ

ಅರಿತು ಮರೆಯಾಗದೆ
ಬೆಳೆದು ಬೆಳಕಾಗುವ
ಮರದ ಬುಡಬಿಡದೆ ಬೆಳೆದು ಬೆಳಕಾಗುವ

Sunday, December 10, 2023

ಹಸಿವನೀಗ್ಯಾವ

ಕಲ್ಲು ಸವೆದಾವ
ಕುಡುಗೋಲು ಸವೆದಾವ
ಬೆನ್ನ ಮೂಳೆಯೂ ಸವೆದಾವ
ಕಷ್ಟದೊಳು ಕನಸುಗಳೂ ಸವೆದಾವ

ಸೋತರು ಬಿಡಲೊಲ್ಲೆನೆಂಬ ಛಲ ಬೆಳೆದಾವ
ಆ ಛಲದಿಂದ ಹೊಲದಾಗ ಬೆಳೆ ಬೆಳೆದಾವ
ಹಸಿರು ತೆನೆ ತೆನೆದು ಹಸಿವನೀಗ್ಯಾವ
ಜಗದಸಿವ ನೀಗ್ಯಾವ

Wednesday, December 6, 2023

ಅರಿಯೋಣ ಅಕ್ಕರೆಯ ಅಂತರಂಗವೊಂದ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು
 
ಅರಿತವರುಂಟೆ ನಿನ್ನಂತರಾಳ
ಅದು ಸಾಗರದಾಳ
ನಡೆದಿವುದು ಅಲ್ಲಿ ಭಾವ-ಬೆಸುಗೆಗಳ ಮೇಳ
ಬೀಳದಿರಲಿ ನಿನ್ನಕನಸುಗಳಿಗೆ ಕೋಳ
 
ಅರಿತೆವೆಂದು ಹಟ್ಟಹತ್ತಿಸಿದವರು
ಅರಿವಿಲ್ಲದ ಅಂದರು
ಅರಿಯದೆ ಅಸುಳೆಗಳ ಕೊಂದರು
ನೀ ಅವರ ಕೈಗೆ ಸಿಗದಿರು
 
ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಸಿಗುತಿರಲಿ ನಿನ್ನ ಬೆಳವಣಿಗಿಗೆ ಪುಷ್ಟಿ

Tuesday, December 5, 2023

ನಾವು!

ನಿಯತ್ತಿನ ನೊಗಹೊತ್ತವರು
ದುಡಿದು ದಣಿಯಲೇಬೇಕಿರುವವರು
ಗೆಲುವೊಂದ ಕಾಣಲು, ಸಾವಿರ ಸಲ ಸೋತವರು
ಬದುಕಿನ ಮೈಲುಗಲ್ಲುಗಳ ಮಗ್ಗಿಲಲಿ ಮೈಕೊಡವಿ ನಿಂತವರು

ಅವಕಾಶ ವಂಚಿತರು
ಪ್ರಭಾವಿಗಳ ಪವಾಡ ಪಡೆಯದಾದವರು
ಪ್ರಯತ್ನವೆಂಬ ಪ್ರಯಾಣದಲಿ ಒಂಟಿಯಾದವರು
ಬಿದ್ದೆದ್ದು ಗೆದ್ದಾಗ ಬೆನ್ನುತಟ್ಟುವವರು ಇಲ್ಲದವರು

ಸೋಲುಗಳ ಸರಮಾಲೆ ಹೊತ್ತವರು
ಸೋಲ ಸೊಲ್ಲಡಗಿಸಿ ಸೆಟೆದುನಿಂತವರು
ಅನುಭವದಿ ಹರಿತವಾದವರು
ನಾವು, ಸೋಲುಂಡು ಗೆಲ್ಲುವವರು

ನಾ ರೈತ

ನೀ ಪಿಸುಗುಡಲು, ನಾ ದನಿ
ನೀ ನಲಿಯಲು, ನಾ ನಾದ
ನೀ ಕಂಪಿಸಲು, ನಾ ಕಣ್ಣೀರು
ನೀ ಚಿಗುರಲು, ನಾ ಚಿಗರೆ
ನೀ ಕೈಹಿಡಿದರೆ, ನಾ ಕಂದ
ನೀ ಬೆಳೆಯಲು, ನಾ ಬಂಗಾರ
ನೀ ಬಿರಿಯಲು, ನಾ ಬೆದರುಬೊಂಬೆ
ನೀ ಮಣಿಯಲು, ನಾ ಮಣ್ಣು

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...