Friday, May 15, 2020

ಬೆಲೆ ಇಲ್ಲದ ಬದುಕ ಬವಣೆ

ನಿನ್ನಸಿವು  ಇಂಗಿಲ್ಲವೇನು
ನಿನ್ನೀ  ಅಟ್ಟಹಾಸಕ್ಕೆ  ಕೊನೆ ಇಲ್ಲವೇನು
ಬರಡಾದ  ಬದುಕಿಗೆ ಬೆಳಕಿಲ್ಲವೇನು
ಕರೋನ...! ನಿನ್ನಿಂದಾದ ದ್ರೋಹಕ್ಕೆ ಕೊನೆ ಇಲ್ಲವೇನು

ಮನ್ನಿಸು ಮಂಡಿಯೂರಿರುವ ಈ ನಿನ್ನ ಕಂದಮ್ಮಗಳ ತಾಯೆ
ಇರಲಿ ಈ ಕರೋನಾಗೆ ನಿನ್ನಿಂದ ಮುಕ್ತಿಯ ಛಾಯೆ...!!!

Tuesday, May 5, 2020

ಕ್ಷಮೆ ಇರಲಿ, ತಿದ್ದುಬಿಡಿ

ತಪ್ಪು, ತಿದ್ದುವ ಕಣ್ಣ್ಗಳಲ್ಲಿದೆಯೇ ಹೊರತು,
ಕರ್ತೃವಿನ ಕೈಯಲ್ಲಲ್ಲ

ಮುದ್ದು ಕಂದಮ್ಮಗಳ ತಪ್ಪು ಒಪ್ಪುಗಳ ತಿದ್ದಲಿಲ್ಲವೇ ನಾವು
ನಲ್ಲ ನಲ್ಲೆಯರ ನಯ ವಂಚನೆಗಳ  ಕ್ಷಮಿಸಲಿಲ್ಲವೇ ನಾವು

ಸರಿಯಲಿ ಮಾತೃಹೃದಯದ ಮೇಲೆ ಹೊರಿಸಿರುವ ಪೊರೆ
ಹರಿಯಲಿ ಸ್ನೇಹ ಪ್ರೀತಿಯ ಸಂಬಂಧಗಳ ನೆರೆ

ನಿನ್ನ ಆಯ್ಕಿಗೊಂದು ವಿರಾಮ

ನಿನ್ನ ಆಯ್ಕೆಗೆ ನೀನೆ ಹೊಣೆ
ಹುಡುಕಬೇಡ ನೀನನ್ನ ಎಣೆ

ಶಸ್ತ್ರಾಸ್ತ್ರ ತ್ಯಜಿಸಿದ ಸೈನಿಕನು ನಾನಮ್ಮ
ಇರಲಿ ನಿನ್ನೀ ದ್ವೇಷಕೊಂದು ವಿರಾಮ...



ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!