Thursday, November 27, 2008

ಕೆಲವೊಮ್ಮೆ

ಈ ನೆನಪುಗಳೇ ಹಾಗೆ
ಬಿರುಗಾಳಿಯಂತೆ
ಎಲ್ಲಿಂದಲೋ ಬಂದು ಕಾಡುತ್ತವೆ
ಕೆಲವೊಮ್ಮೆ ಕನಸುಗಳಾದರೆ
ಕೆಲವೊಮ್ಮೆ ಕವನಗಳಾಗುತ್ತವೆ

Tuesday, November 18, 2008

ಭ್ರಮೆ...

ಅಂದೊಮ್ಮೆ ಅಂದಿದ್ದೆ
ನೀನಿರದೆ ನಾನಿಲ್ಲ
ಒಲವಿಲ್ಲ, ಛಲವಿಲ್ಲ, ಬದುಕಿಲ್ಲ...
ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ
ಅರಿತಾಯ್ತು!!! ನೀನಿರದೆ ನಾನುಂಟು
ಒಲವುಂಟು, ಚಲವುಂಟು, ಬದುಕುಂಟು...

Monday, November 17, 2008

ಕನಸು...!

ಕನಸು ನೂರಾಗಿತ್ತು
ಆದರೆ ಪ್ರಯತ್ನ ಚೂರಾಗಿತ್ತು
ಅದರಿಂದಲೇ, ಅದರಿಂದಲೇ ಹೀಗಾಯ್ತು
ಗಗನ ಕುಸುಮವಾಯಿತು
ಕನಸು ಕೈಗೆಟುಕದಾಯಿತು
ಇದಕೆ ನಾನೆಹೊಣೆ
ಅದಕೆ ನಾ ಹುಡುಕಬಾರದು ಬೇರೆಯವರ ಹೆಣೆ!

ಅನಾಮಿಕೆ...

ಪ್ರೀತಿಯಲಿ ಸಾಗರ ನಾನು..... ಅದರಲ್ಲಿ ಈಜಲಾರದೆ ಹೋದ ಮೀನು ನೀನು...... ಅನಾಮಿಕೆ!

ಕ್ಷಮಿಸು....!!!

ಮನದ ಮಾತುಗಳನ್ನ,
ಬಚ್ಚಿಡಲಾಗದೆ ಬಿಚ್ಚಿಟ್ಟಿದ್ದಕ್ಕೆ
ಪ್ರಶಾಂತವಾದ ನಿನ್ನ,
ಮನಸಿನಲಿ ಅಲೆ ಹೆಬ್ಬಿಸಿದ್ದಕ್ಕೆ
ಕುಡಿಗಣ್ಣ ನೋಟವನು,
ತಪ್ಪಾಗಿ ಅರ್ಥೈಸಿದಕ್ಕೆ...
ಕ್ಷಮಿಸು  ನನ್ನ...!!!

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!