Wednesday, October 26, 2022

ಬೆಳಕಿನಾಚರಣೆಯ ಬಿರುಸು ಬೆಂಕಿಯಲ್ಲಿ ಬೆಂದಿದೆ

ಕೇಳದಾಗಿದೆ ಪ್ರಕೃತಿ ಮಾತೆಯ ಆರ್ತನಾದ
ಈ ಸದ್ದು ಗದ್ದಲಗಳಲ್ಲಿ
ಪಟಾಕಿಯ ಸದ್ದು ಗದ್ದಲಗಳಲ್ಲಿ

ಹೃದಯಗಳೀಗ ಕಂಪಿಸುತ್ತಿವೆ
ಇಂಗಾಲ ತುಂಬಿದೆ ಗಾಳಿಯಿಂದಾಗಿ
ಮತ್ತದೇ ಮನು ಕುಲದ ಆರ್ತನಾದ
ಕೇಳದಾಗಿದೆ ಈ ಪಟಾಕಿಯ ಸದ್ದು ಗದ್ದಲಗಳಲ್ಲಿ

Saturday, October 22, 2022

ಸಹನೆ

ಸಹನೆ ನನದಿರಬಹುದು, ಸಹಿಸಲೇಕೆ ನಿನ್ನ
ಪ್ರೀತಿಯಿಂದ ಧಾರೆಯೆರೆದದ್ದು ಎನ್ನ ಕನಸನ್ನ
ಸಹನೆಯಿಂದ ವಿಕಸನಗೊಳಿಸಿದ್ದು ನೂರಾರು ಹೃದಯಗಳನ್ನ
ವ್ಯಕ್ತಿತ್ವದಿಂದಾಚೆಯ ಹೋಲಿಕೆಯದು ಗುನ್ನ
ನಿರ್ದರಿಸಿಯೇ ಆಯಿತು, ಇಲ್ಲಿಂದ ಕಾಲ್ಕಿಳುವುದೇ ಚೆನ್ನ
ಇಲ್ಲಿಂದ ಕಾಲ್ಕಿಳುವುದೇ ಚೆನ್ನ...

Wednesday, October 12, 2022

ಸಿರಿಧಾನ್ಯ - ನಾನು ಯಾರು

ನಾನು ಯಾರು ಬಲ್ಲೆಯೇನು
ಆರೋಗ್ಯದ ಸಿರಿಯು ನಾನು
ಪ್ರೋಟೀನು ಐರನ್ನು ಕ್ಯಾಲ್ಸಿಯಂ ಕಣಜ ನಾನು
ಅಕ್ಕಿ ಗೋದಿ ಮೈದಕ್ಕೆ ಬದಲಿ ನಾನು
ಹಿರಿಯ ಸಿರಿಯ ಸಿರಿಧಾನ್ಯ ನಾನು

ಸಮತೋಲನ ಆಹಾರದ ಸರದಾರನು 
ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹಕ್ಕೆ ಮದ್ದಲ್ಲವೇನು
ಕಡಿಮೆ ಕ್ಯಾಲೋರಿ, ರೋಗ ನಿರೋಧಕ ಶಕ್ತಿನೀಡುವೆನು
ಸಿರಿಯ ಹಿರಿಯ ಸಿರಿಧಾನ್ಯ ಸೇವನೆ ಅವಶ್ಯವಲ್ಲವೇನು 

ನೀರ ಬವಣೆ ನೀಗುವೆನು
ಬಿಸಿಲು ಬರ ಶಾಖ ತಟ್ಟದೆನ್ನನು
ಪರಿಸರ ಪೋಷಕನು ನಾನು
ಭೂ ಒಡಲ ಬರಿದಾಗಿಸೆನು
ಮನುಜ, ಮಣ್ಣು ರಕ್ಷಕ ನಾನಲ್ಲವೇನು
ಹಿರಿಯ ಸಿರಿಯ ಸಿರಿಧಾನ್ಯ ನಾನು

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!